ಶನಿವಾರ, ಸೆಪ್ಟೆಂಬರ್ 12, 2009

"ಸಮಗ್ರ ಕೃಷಿ"

"ಸಮಗ್ರ ಕೃಷಿ"
ಸಮಗ್ರ ಕೃಷಿ ಪದ್ದತಿ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿಗೆ ಸ್ವಾವಲಂಬನೆಯ ಬದುಕನ್ನು ರೂಪಿಸಿಕೊಳ್ಳಲು ಅತ್ಯಂತ ಸಹಕಾರಿ.
ಇದರ ವ್ಯಾಖ್ಯಾನ " ಸಣ್ಣ ಹಿಡುವಳಿಯಲ್ಲಿ ಕಡಿಮೆ ಕರ್ಚಿನಲ್ಲಿ ಬೆಳೆಯುವ ಕೃಷಿ." ಈ ಪದ್ದತಿ ಪ್ರಮುಖವಾಗಿ ೫ ಘತಕಗಳನ್ನು ಒಳೊಗೊಂಡಿದೆ.
೧) ಹೈನುಗಾರಿಕೆ
೨) ಕೃಷಿ
೩) ತೋಟಗಾರಿಕೆ
೪)ಅರಣ್ಯೀಕರಣ
೫) ಜಲಾನಯನ
ಈ ಐದು ಅಂಶಗಳು ಸುಸ್ಥಿರ ಕೃಷಿಯ ಅಂಗಗಳು. ಒಂದು ಎಕರೆ ನಿಮ್ಮ ಜಮೀನಿನಲ್ಲಿ ಈಪದ್ದತಿ ಹೇಗೆಂದರೆ, ೧೦ ಗುಂಟೆ ಜಾಗೆಯಲ್ಲಿ
ಮನೆ, ಕೊಟ್ಟಿಗೆ, ಕೈತೋಟ ಇತ್ಯದಿ .. ೧೦ ಗುಂಟೆ ತೋಟಗಾರಿಕೆ, ೧೫ ಗುಂಟೆ ಕೃಷಿ ಇನ್ನುಳಿದ ೫ ಗುಂಟೆಯಲ್ಲಿ ಜಲಾನಯನದ ಕೃಷಿ
ಹೊಂಡ ಮತ್ತು ಬದು ನಿರ್ಮಾಣ .. ಅಲ್ಲೇ ಅರಣ್ಯೀಕರಣವು ಇರುತ್ತದೆ.
ಇಲ್ಲಿ ಜಮೀನಿನ ಸುತ್ತಲು ಬದು ನಿರ್ಮಾಣ ಮಾಡಿ ಬೇಲಿಗೆ , ಹಣ್ಣು ಹಂಪಲಿನಗಿಡ, ತೇಗದ ಗಿಡ, ಇತ್ಯಾದಿ ಗಳನ್ನು ನೆಡಬೆಕು.
ಜಾಗದ ಎತ್ತರದ ಪ್ರದೇಶದಲ್ಲಿ ಮನೆ ಕೊಟ್ಟಿಗೆ ಇರಲಿ. ನಂತರ ತೋಟ ಅದಾದ ನಂತರ, ಕೃಷಿ ಬೆಳೆಯುವ ಜಾಗ. ಕೋನೇಯಲ್ಲಿ ಕೃಷಿ
ಹೊಂಡ.. ಇಲ್ಲಿಗೆ ಸಮಗ್ರ ಕೃಷಿಯ ಐದೂ ಘಟಕಗಳು ಆದವು.
ಇಲ್ಲಿ ವ್ಯಾಖ್ಯಾನದಲ್ಲಿ "ಕಡಿಮೆ ಕರ್ಚಿನಲ್ಲಿ ಬೆಳೆಯುವ ಕೃಷಿ" ಎಂದು ಹೇಳಲಾಗಿದೆ. ಅದು ಹೇಗೆ ಸಾಧ್ಯ ಎಂಬುದನ್ನು ನಾನು ಮುಂದಿನ
ಅಂದರೆ ಅಕ್ಟೊಬರ್ ತಿಂಗಳಲ್ಲಿ ವಿವರಿಸಲು ಪ್ರಾರಂಬಿಸುತ್ತೇನೆ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ